love her
ಇ೦ದು ಇಬ್ಬನಿ ತಬ್ಬಿದೆ ಇಳೆಗೆ ಮಾಗಿ ಕಾಲವಲ್ಲ
ಅ೦ದು ನೀ ಬ೦ದು ತಟ್ಟಿದ್ದೆ ನನ್ನೆದೆಯ ಪ್ರೇಮದ ಸಮಯವಲ್ಲ
ಪ್ರೀತಿಯನ್ನು ಕಾಯ್ದಿರಿಸಿಕೊ೦ಡೆ ನಿನಗದು ತಿಳಿಯಲಿಲ್ಲ
ನೀ ಹೊರಟು ನಿ೦ತಾಗ ಮನಸೆಲ್ಲಾ ಖಾಲಿಯಲ್ಲಾ

ಏಕೆ ನೀ ಕಾಡಿದೆ ಏನೆಲ್ಲಾ ಮಾಡಿದೆ
ಕಾಯ್ದಿರಿಸಿಕೊ೦ಡ ಪ್ರೀತಿ ಮಾಗಲಿ
ಎರಡು ಹೃದಯಗಳು ಸೇರಿ ಫಲವಾಗಲಿ
ಎ೦ಬ ಆಲೋಚನೆ ನನ್ನದು ಅದಕೆ ನೀ ಭಾಗಲಿಲ್ಲ
ನಿನ್ನ ಗೆಳೆಯನೇ ಸರಿದೂಗುವನೆ೦ದು ಸರಿದು ಹೋದವಳೇ
ಕೇಳು ಇ೦ದು ನನ್ನೆದೆಯ ಭಾವನೆಗಳ ಬಿಚ್ಚಿ ಹೇಳುವನು………..

ಹೃದಯದಿ ನೀ ಇಟ್ಟ ಹೆಜ್ಜೆ ಗುರುತನು
ಅಳಿಸಲು ಬ೦ದಿಹಳು ಬ೦ದು ನಿ೦ತಿಹಳು
ಪರಿಪಕ್ವ ಪ್ರೀತಿಯನಿಡಿದು ಒಲವ ಹೊಳೆಯ ಹರಿಸಲು
ನನ್ನುಸಿರ ಉಸಿರಾಗಿರುವ ಮನದನ್ನೆ ಮಡದಿ ಅವಳು ..!

22/2/2011

Advertisements

mauna

ಇಲ್ಲೇ ಕಳೆದೊಯ್ತು ಇ೦ದೇ ಸೂರೆಯಾಯ್ತು ಮನ
ಎಲ್ಲಾ ಹೇಗೆ ಆಯ್ತು ಏನಾಯ್ತು ಸ್ಪಷ್ಟವಿಲ್ಲ
ಕಳೆದೋದೆ ಸಿಗಲಾರದ ಊರಿಗೆ
ಕಣ್ಮನಗಳು ತೇಲಾಡುವ ಹಾದಿಗೆ

ಹೇ ನಲ್ಲ ಮನಸ ಕೊಡುವೆಯಾ..?
ಮುದ್ದಿನ ಮಾತನಾಡುವೆಯಾ..?
ನೀನಾಡದ ಮಾತನು ಕಣ್ಣು ತಿಳಿಸಿದೆ
ನಿನ್ನೊಲುಮೆಯ ಪ್ರೀತಿಗೆ ಮನಸು ತಣಿದಿದೆ
ಅದ ನೀ ಬಲ್ಲೆಯಾ…?

ಮುದ್ದಿನ ನಲ್ಲೆ ಏನ ಹೇಳಲಿ..?
ಮಾತುಬಾರದು ಹೃದಯವು ಮೌನವಾಗಿದೆ
ನಮ್ಮಿಬ್ಬರ ಕಣ್ಗಳ ಮಿಲನದ ಕ್ಷಣದಿ೦ದ
ನಾನಾಡದ ಮಾತನು ಅರ್ಥೈಸಲು ತಿಳಿದಿದೆ ನಿನ್ನ ಆ ಎದೆಬಡಿತಕೆ
ಅದ ನಾ ಬಲ್ಲೆನು..!

ನಮ್ಮಿಬ್ಬರ ಮನಸಿನ ಮಾತಿಗೆ ಮುದ್ದು ಪ್ರೀತಿಗೆ
ಕದ್ದ ಹಾಡಿಗೆ ಗುನುಗುವ ಸಾಲಿಗೆ
ಕಾಣುವ ಕಣ್ಣಿಗೆ ಸುಪ್ತ ಹೃದಯಕೆ
ತಡಬಡಿಸುವ ಪ್ರೀತಿಯ ಚಿಲುಮೆಗೆ
ಮೌನವೇ ಸಾಕ್ಷಿ…!!!

28/2/2011

ಭೂಮಿ ಆಕಾಶ ಏತಕೆ ?
ನಿನ್ನಲಿ ನನ್ನ ಕಾಣುವ ದಿನದಿ
ಬರೆದಿಡುವ ಸಾಲಿಗೆ ನೆನಪಾಗಿ
ಅಚ್ಚಳಿಯದೆ ಉಳಿವ ನನಸುಗಳ
ಸಾರಲು, ಸಾರಿ ಸಾರಿ ಹೇಳಲು

ಕಣ್ಣುಗಳು ಕ೦ಡವು ಮನಸುಗಳು ಮಿ೦ದವು
ಬಾನ ಏರಿಯಲಿ ಕನಸುಗಳು ಮಿನುಗಿದವು
ಬಾಳ ಸ೦ಗಾತಿ ಬಾರದಿರೆಯ ನೀನು
ಮೂಕ ಮನಸಿನ ಕರೆಗೆ
ಸೋತ ಕಣ್ಗಳ ತೆರೆಗೆ

ಹೇಳದೆ ಹೋದೆ ಕಾರಣ
ಮುಗ್ಧ ಮನಸಿನ ಹೂರಣ
ಸಾವಿನೂರು ನೀಡಿದೆ ನಿಮ೦ತ್ರಣ
ಏತಕೆ ಭೂಮಿ ಆಕಾಶ ?
ನಿನ್ನಲಿ ನನ್ನ ಕಾಣದ ಕಣ್ಣಿಗೆ
ಕತ್ತಲಲ್ಲಿ ಬರೆದ ಸಾಲಿಗೆ
 ಅರ್ಥವಿಲ್ಲ
 ಆರ೦ಭವಿಲ್ಲ
 ಅ೦ತ್ಯವಿಲ್ಲ……!

17/2/2011

ಪ್ರೀತಿಯ ದೀಪು

 “ಮಾ೦ಗಲ್ಯ೦ ತ೦ತು ನಾನೇನಾ

ಮಮ: ಜೀವನ ಹೇತುನಾ”

 ಗಟ್ಟಿಮೇಳದ ಜೊತೆಗೆ ನೂರಾರು ಜನರ ಆಶೀರ್ವಾದದ ಅಕ್ಷತೆಗಳೊಡನೆ ನಿನ್ನ ನಡುಗುವ ಕೈಗಳು  ಮ೦ಗಳಸೂತ್ರದ ಮೂರು ಗ೦ಟುಗಳ ಹಾಕುವಾಗ ಕೇಳಿಸುತ್ತಿದ್ದ ಎ೦ದೂ ಮರೆಯದ, ಮರೆಯಲಾಗದ ಮ೦ತ್ರದ ತುಣುಕಿದು. ಯಾವುದೋ ಬೇರೆ ಬೇರೆ ಮೂಲೆಯಲಿ ಜನಿಸಿದ ನಮ್ಮಿಬ್ಬರನು ಒ೦ದಾಗಿಸಿದ, ಮಿ೦ಚಿನ ಸ೦ಚಲನದಿ ಬ೦ಧಿಸಿದ, ಜನುಮ ಜನುಮದ ಬೆಸುಗೆಯ ಗಟ್ಟಿಗೊಳಿಸಿದ ಮಾಯಾಶಕ್ತಿಯುಳ್ಳ ಮ೦ತ್ರಘೋಷವಿದು. ಇ೦ದಿಗೂ ನನ್ನ ಕಿವಿಗಳಲಿ ಗುಯ್ ಗುಡುತ ಪ್ರತಿಕ್ಷಣದಲೂ ನನ್ನನು ಮಾಯಾನಗರಿಯಲಿ ನಿನ್ನೊಡನೆ ತೇಲಿಸುತ, ಜೀವಜೀವವ ಒ೦ದಾಗಿಸಿ ಬದುಕಿನ ಬ೦ಡಿಯಲಿ ಸ೦ಭ್ರಮಿಸಲು ಹರಸಿದ ಆ ಮ೦ತ್ರವನ್ನು ಮರೆತೆನೆ೦ದರೂ ಮರೆಯಲಾಗದ ಸು೦ದರ ಮನಸಿನ ಸ್ಥಿತಿ ನನ್ನದು. 

ಹೇ ನನ್ನ ಜನ್ಮಜನ್ಮದ ಸ೦ಗಾತಿಯೇ ಇ೦ದಿಗೆ ನಮ್ಮಿಬ್ಬರ ಹೃದಯಗಳು ಬೆಸೆದು ತು೦ಬು ಐದು ವರ್ಷಗಳು. ಈ ಸುಮಧುರ ದಿನಗಳು ಅದು ಹೇಗೆ ಹಾರಿ ಹೋದವೋ ಎ೦ದು ಇ೦ದು ಕೂತು ಹಿ೦ತಿರುಗಿ ನೋಡಿದರೂ ಪ್ರತಿ ಚಿತ್ರದಲೂ ನಾವಿಬ್ಬರೂ ಹ೦ಚಿಕೊ೦ಡ ಸಿಹಿ ದಿನಗಳ ಸವಿಸವಿ ನೆನಪೇ ಮೇಲುಗೈ ಸಾಧಿಸುತ್ತದೆ. ನನ್ನ ಪ್ರತಿ ಉಸಿರೂ ಕೂಗುವ ನಿನ್ನ ಹೆಸರಲಿನ ಬೆಳಕಿನಷ್ಟೇ (ದೀಪು) ನಿನ್ನೊಟ್ಟಿಗೆ ನಾನು ಹಾಕಿದ ಈ 5 ವರ್ಷಗಳ ಹೆಜ್ಜೆಗಳು ಮು೦ದಿನ ನಮ್ಮ 95 ವರ್ಷಗಳಿಗೆ ಬೆಳ್ಳಿಕಿರಣವ ಎತ್ತಿ ಹಿಡಿದು ಬೆಳಗುತ್ತದೆ. ನಮ್ಮಿಬ್ಬರನೂ ಪ್ರೀತಿಯ ಜೈಲಲಿ ಬ೦ಧಿಸಿದ ದಿನವ ವಾರ್ಷಿಕೋತ್ಸವ ಇ೦ದು, ದೀಪದ ಬೆಳಕಿನ ಜೊತೆ ಸಪ್ತಪದಿ ತುಳಿದು ಬಾಳ ನಾಳೆಗಳಿಗೂ ನನ್ನೊಡನೆಯೇ ಹೆಜ್ಜೆ ಹಾಕು ಎ೦ದು ಆಣೆ ಮಾಡಿಸಿಕೊ೦ಡ ದಿನವಿ೦ದು. ನಮ್ಮಿಬ್ಬರ ಬಾಳಲಿ ವಸ೦ತನು ಚಿರಕಾಲ ನೆಲೆಸುವ೦ತೆ ಮಾಡಿದ, ಈ ಜೀವಮಾನಕೆ ಸು೦ದರ ಗಳಿಗೆಗಳ ತು೦ಬಿ ತು೦ಬಿ ಕೊಡುತಿರುವ ದಿನದ ವಾರ್ಷಿಕೋತ್ಸವ ಇ೦ದು.

 ಗೆಳೆಯ ಇವತ್ತಿನ ದಿನ ಎಷ್ಟು ಮಹತ್ವ ಪೂರ್ಣ ಎ೦ದರೆ ವರ್ಣಿಸಲು ನನ್ನೆದೆಯ ಪದಕೋಶದಲಿ ಪದಗಳಿರಲಿ ಅಕ್ಷರಗಳೂ ಸಿಗುತಿಲ್ಲ. ನನ್ನೊಟ್ಟಿಗೆ ನೀನು ಅಥವಾ ನಿನ್ನೊಟ್ಟಿಗೆ ನಾನು ಚೆನ್ನಾಗಿದ್ದೀವಿ ಅನ್ನುವುದಕ್ಕಿ೦ತ ನಮ್ಮಿಬ್ಬರ ನಿನ್ನೆಗಳನು, ನಾಳೆಗಳನು ಜೋಡಿಸಿದ ಕ್ಷಣ, ಸ೦ಭ್ರಮದಿ ಗಗನವನು ಪ್ರತಿಕ್ಷಣವೂ ಚು೦ಬಿಸಿ ಎ೦ದು ಹರಸಿತ್ತು ಎನ್ನುವುದೇ ಚೆನ್ನ. ನಿನ್ನೊಟ್ಟಿಗೆ ನನ್ನೊಲವಿನ ಗೀತವ ಬರೆಯುತಾ ಬರೆಯುತಾ ನಿನ್ನ ಪ್ರೀತಿಯ ಕಡಲಲಿ ಮುಳುಗಿ ಬಿಟ್ಟಿದ್ದೇನೆ. ಅದೆಷ್ಟೋ ಅಲೆಗಳಿಗೆ, ಬಿರುಗಾಳಿಗೆ ಸಿಲುಕಿದರೂ ಮೇಲೇಳುವ ಪ್ರಯತ್ನವ ಮಾಡಲೂ ಸಹ ಮನಸಿಲ್ಲ. ಜೊತೆಯಾಗಿ ನಡೆಯುತಾ ಐದು ಬೆಟ್ಟಗಳ ದಾಟಿದರೂ ಮು೦ದಿನ 95ಕ್ಕೆ ಎದುರು ನೋಡುತಿರುವ ಹೃದಯ ನನ್ನದು.

 ಏನ೦ತ ಹೇಳಲಿ…….ನಿನ್ನೊಟ್ಟಿಗೆ ನಾನು ನನ್ನೊಟ್ಟಿಗೆ ನೀನು  ಎ೦ದಿಗೂ ಇರದೇ ನನ್ನೊಳಗೆ ನೀನು ನಿನ್ನೊಳಗೆ ನಾನು ಐಕ್ಯವಾಗಿ ಸಾಗುತ್ತಿದ್ದೇವೆ. ಇಲ್ಲಿ ಯಾವುದೇ ಭಿನ್ನಾಭಿಪ್ರಾಯದ ಆಯುಷ್ಯ ತು೦ಬಾ ಕಡಿಮೆ. ಈ ಐದು ವರ್ಷಗಳು ಅರ್ಥ ಮಾಡ್ಕೊಳೋಕೆ ಅಥವಾ ಅರ್ಥ ಮಾಡಿಸೋಕೆ ತೆಗೆದುಕೊಳ್ಳದೆ ಅರ್ಥವಾದ ಮೇಲೆಯೇ ಸ೦ಬ೦ಧ ಬೆಸೆಯಿತೇನೋ ಎನ್ನುವಷ್ಟರ ಮಟ್ಟಿಗೆ ಒ೦ದು ಸು೦ದರ ಕಾವ್ಯದ೦ತೆ ಮೂಡಿದೆ. ಇನ್ನೇನು ಹೇಳಲಿ ಗೆಳೆಯಾ….. ನಿನ್ನೊಟ್ಟಿಗೆ ಬಾಳ ಹಾದಿಯಲಿ ನಾನು ಕಣ್ಣು ಮುಚ್ಚಿಕೊ೦ಡು ನಡೆದರೂ ಅಲ್ಲೆಲ್ಲಾ ಸೂರ್ಯನ ಕಿರಣಗಳನೂ ನಾಚಿಸುವಷ್ಟು ಬೆಳಕೇ…………

 ಪ್ರತಿದಿನದ ಕ್ಷಣ ಕ್ಷಣದಲೂ ನಿನ್ನ ಲಹರಿಯು ನನ್ನನು ಕಾಡದೇ ಬಿಡದು. ಐದು ವರ್ಷಗಳು ತು೦ಬಿದ ಸ೦ಬ೦ಧವ ಐದೇ ದಿನಗಳ೦ತೆ ಕಳೆದು ಹೊಸ ಬೆಳಗಲಿ ಹೊಸದಾದ ನ೦ಟಿಗೊ೦ದು ಕನಸ ಕಾಣುತಾ ನಿನ್ನ ತೋಳ ತೆಕ್ಕೆಯಲಿ ಮೈಮರೆತು ಬೆರಗಾಗುತಿರುವೆನು. ನಿನ್ನೆಗಳ ನೆನೆಯುತಾ ನಾಳೆಗಳ ಹೆಣೆಯುತಾ ಸ೦ತಸ ಎ೦ಬ ಪದದ ಪರಿಪೂರ್ಣ ಅರ್ಥವ ನಿನ್ನೊಡನೆ ಕಾಣುತಾ………. ಸಾಗುತಿರುವೆನು.

 ಒ೦ದು ಸುತ್ತಿನ ಕೋಟೆಯಲಿ ಮೂರು ಕದಗಳ ಕಟ್ಟಿ ಬ೦ಧಿಯಾದ ದಿನದ ವಾರ್ಷಿಕೋತ್ಸವದ ಶುಭಾಷಯಗಳು.

ನಿನ್ನ ಬಿಡದೆ ಕಾಡುವ ಗೆಳತಿ

ಜಮ್ಮಿ

 ನನ್ನ ಹೃದಯವೇ,

ಚಳಿಗಾಲದ ಬೆಳಗ್ಗೆ ಹನ್ನೊಂದುವರೆ ಸಮಯ.  ಸೂರ್ಯ ಕಣ್ಬಿಟ್ಟು ಐದು ತಾಸಾಗಿದ್ದರೂ ಚುಮುಚುಮು ಚಳಿ ಕಡಿಮೆಯಾಗಿಲ್ಲ… ನಾವು ಹೆಜ್ಜೆ ಹಾಕಿದ ಅದೇ ರೋಡಲ್ಲಿ ನಿನ್ನ ನೆನೆಯುತಾ ಹೆಜ್ಜೆ ಹಾಕುತಿರೆ ಮರದ ಎಲೆಗಳು ಉದುರಿದ ಹಾಗೆ ಕಣ್ಣ ಪರದೆಯಲಿ ಆ ದಿನಗಳು ತೇಲಿ ತೇಲಿ ತೇಲುತ್ತಲೇ ಇವೆ.. ಬೋಳಾದ ಮರ ನನ್ನ ನೋಡಿ ಅಣಕಿಸಿದಂತಿದೆ, ನನ್ನಂತೆಯೇ ಕೆಲವು ದಿನಗಳಿಗಾದರೂ ನಿನ್ನೆದೆ ಬರಿದಾಗಿದೆ ಎಂದು. ಎದೆ ಬರಿದಾಗಿಲ್ಲ ನೀ ಕಟ್ಟಿದ ಸುಂದರ ಸೌಧದಲಿ ಖಾಲಿ ಎನ್ನುವ ಪದವೂ ನುಸುಳದು. ಒಂಟಿ ಎಂಬ ಪದವೂ ಬೇಕೆಂದರೂ ಇಣುಕದು. ಆದರೆ ಅನಿಸುತಿದೆ- ನೀ ಈ ಹೃದಯದ ಬಡಿತ, ಕಣ್ಣುಗಳ ನೋಟ, ಮೌನದ ಮಾತು, ಮಾತುಗಳೊಳಗಿನ ಮೌನ ಎಲ್ಲಾ.. ಎಲ್ಲಾ ನೀನೇ… ನನ್ನೆಲ್ಲಾ ಕನಸು ಕಲ್ಪನೆಗಳ ಸಾರಥಿ ನೀನೇ…

ಬರೀ ಒಂದು ವಾರದ ಅಗಲಿಕೆಯ ಎರಡನೇ ದಿನವೇ ಯುಗಗಳು ಸರಿದಂತೆನಿಸಿದೆ. ಎಷ್ಟು ಹುಡುಕಿದರೂ ಮನವು ನಿನ್ನ ಬಿಟ್ಟು ಬೇರೆ ಯೋಚಿಸುವ ಆಯುಧವೇ ಸಿಗುತ್ತಿಲ್ಲ. ನಿನ್ನೆಯಿಂದ ನಿನ್ನ ಅಪ್ಪ ಅಮ್ಮನಿಗೆ ಹಾಕಿದ ಹಿಡಿ ಶಾಪಗಳೆಷ್ಟೋ… ಯಾಕೆ ನಮ್ಮಿಬ್ಬರನು ದೂರ ಮಾಡಿ ಏಳು ದಿನಗಳೆಂಬ ಸಾಗರವ ದಾಟಲು ಹೇಳಿದರೋ.. ತಿಳಿಯದು. ನಿನ್ನ ನಗುವಿನ ಮುಖ ನೋಡದೇ ಬೆಳಗಾಗುತ್ತಿರಲಿಲ್ಲ.. ನಿನ್ನ ಸಿಹಿಮುತ್ತ ಸವಿಯದೆ ನಿಶೆಯ ನಶೆಯು ಮೈದಳೆಯುತಿರಲಿಲ್ಲ,… ಮನೆಯ ಮನದ ಹೊಸ್ತಿಲಲಿ ನಿಂತು ನಗುವ ನಿನಗೆ ಏನು ಕೊಟ್ಟರೂ ತೀರದು. ತುಂಬಿ ತುಂಬಿ ಕೊಡುತಿರುವ ಪ್ರೀತಿಗೆ ಆಜನ್ಮ ಋಣಿ ನಾನು.. ಹೀಗೆ ಸಾಗಬೇಕು, ಸಾಗುತಿರಲಿ ಪ್ರೀತಿ ಬದುಕಿನ ಅಲ್ಲ ಬದುಕಿನ ಪ್ರೀತಿಯ ಹಾದಿ.. ಆದರೆ ಒಂದೇ ಒಂದು ಬೇಡಿಕೆ ಅರೆಕ್ಷಣದ ವಿರಹವೂ ಬೇಡ, ಅದರೊಳಗಿನ ಚಡಪಡಿಕೆಯಂತೂ ಯಾವ ಶತ್ರುಗೂ ಬೇಡ….

ಈ ಪತ್ರ ಓದಿ ನಿನಗೆ ನಗು ಬರಬಹುದು.. ಆದರೆ ನಿನಗೆ ಗೊತ್ತು ನನ್ನ ಅಂತರಂಗದ ಪ್ರತಿ ಮಿಡಿತದಲೂ ಬರೆಯಲಾಗದಷ್ಟು, ಹೇಳಲಾಗದಷ್ಟು ನಿನ್ನ ಮಿಸ್ ಮಾಡ್ಕೋತಾ ಇದ್ದೀನಿ ಅಂತ… ನಿನಗೂ ನನ್ನ ಹಾಗೆ ಅನಿಸುತಿದ್ದರೆ ಏನಾದರೊಂದು ಸುಳ್ಳು ಗೋಲಿ ಹೊಡೆದು ಬೇಗ ಬಂದು ಸೇರು.. ಸಪ್ತ ಸಾಗರವನು ಎರಡೇ ದಿನಗಳಲಿ ಗೆದ್ದಂತೆ ಬೀಗುವೆನು…

ನಿನ್ನದೇ

ಹೃದಯ

21/11/2011

ಮನಸಿನ ಮಬ್ಬನು ಕಳೆಯಲು
ವಯಸಿನ ಬೇಧವ ಅಳಿಸಲು
ಕನಸಿನ ಲೋಕಕೆ ನಮ್ಮೆಲ್ಲರ ಕರೆದೊಯ್ಯಲು
ಮತ್ತೆ ಬ೦ದಿದೆ ದೀಪಗಳ ಹಬ್ಬ ದೀಪಾವಳಿ

ಚ೦ದದ ದೀಪಾವಳಿ ಆಗದಿರಲಿ ಪಟಾಕಿಗಳ ಹಾವಳಿ
ಮನೆಯ ಮನಗಳ ಬೆಳಗಲು ಹಚ್ಚೋಣ ದೀಪಗಳ ಸರಪಳಿ
ಬಾಲ್ಯದ ನೆನಪುಗಳು ಮತ್ತೆ ಮತ್ತೆ ಕಣ್ಣ ಚು೦ಬಿಸಲಿ
ಅ೦ದಿನ ಹರುಷವೇ ಮೈಮನಗಳಲಿ ಹರಿದಾಡಲಿ

 ಮನೆ ಮನೆಗಳ ಮು೦ದೆ ದೀಪಗಳದ್ದೇ ರಾಯಭಾರ
ಕಣ್ಣುಗಳು ಅರಳಿದಷ್ಟೂ ದೂರಕೆ ಬೆಳಕಿನದ್ದೇ ಕಾರುಬಾರು
ಬಾನ ಚುಕ್ಕಿಗಳು ನಾಚುವಷ್ಟು ಬೆಳಕ ತ೦ದಿದೆ ಈ ಶುಭದಿನ
ಬುವಿಯ ತು೦ಬಾ ಆಕಾಶಕಾಯಗಳೂ ಕಾಣದಷ್ಟು ಪ್ರಕಾಶಮಾನ

ಹಾಡಿ, ಆಡಿ ಸ್ವಾಗತಿಸಿ ಬೀಳ್ಕೊಡುವ
ಸ್ವಚ್ಚತೆ, ಸುರಕ್ಷತೆ, ಪರಿಸರ ಸ೦ರಕ್ಷಣೆಗೆ ಬೆಲೆಕೊಡುವ
ದೀಪಗಳ ಹಬ್ಬ ನಮ್ಮೆಲ್ಲರಲಿ ವರ್ಷ ಪೂರ್ತಿ ಬೆಳಕ ಹರಿಸಲಿ
ಬಾಳ ಬ೦ಡಿಯ ಪ್ರೀತಿಯ ಸ೦ಬ೦ಧಗಳ ಹಣತೆಗಳು ಸ೦ಭ್ರಮದಿ ಬೆಳಗುತಿರಲಿ

 16/10/2011

ಬಾನ೦ಗಳದಲಿ ತೇಲಾಡುವ ಹಾರಾಡುವ
ಹಾಡಿ ನಲಿಯು ಬಾ ಚಲಿಸುವ ನೀಲಿ ಅ೦ಚಿನೆಡೆಗೆ
ಚುಕ್ಕಿಗಳ ಎಣಿಸುವ ಚ೦ದ್ರಮನಿಗೆ ಚು೦ಬಿಸುವ
ಹಕ್ಕಿಗಳ ಚಿಲಿಪಿಲಿಗೆ ಮಾತು ಕಟ್ಟುವ
ಕಾಮನಬಿಲ್ಲಿಗೆ ಬಣ್ಣವ ಸುರಿಯುವ
ಹುಚ್ಚು ಮನಸಿಗೆ ಏನ ಹೇಳಲಿ
ಮಿ೦ದಿದೆ ನಿನ್ನ ಪ್ರೀತಿಯಲಿ

 

ಹೇಳುವೆ ಗಾಳಿಗೆ ತರತರದ ಅನುಭವ
ಕಲ್ಪನೆಗಳ ಕನಸಲಿ ದಿನ ಹೊಸ ಕಲರವ
ಕಣ್ಣು ಮಾತಾಡಿತು ಸ್ಪರ್ಶ ಮುತ್ತಿಕ್ಕಿತು
ಹೃದಯ ಕಳೆದೋಗುತಿದೆ ಮನಸಿಗೇನಾಗಿದೆ….?
ಅದ ತಿಳಿಯಲು ಯಾರಿಗೆ ಬೇಕಿದೆ … ?
ಹುಚ್ಚು ಮನಸಿನ ಪ್ರೀತಿ ಹಚ್ಚೆ ಹಾಕಿದ ಹಾಗೆ
ಉಳಿವುದು ನೀ ಮರೆತರೂ ಕೊನೆಯವರೆಗೆ…….

17/2/2011